Monday 14 February 2011

ಪ್ರೇಮಿಗಳಿಗೆ

ಕಣ್ಣಲ್ಲಿ ಕಲೆತು
ನೋಟದಲ್ಲಿ ಬೆರೆವ
ಆ ಜೋಡಿಯ ಜೋಡಿ ಕಂಗಳಿಗೆ

ಬೆರಳಲ್ಲಿ ಬೆಸೆದು
ಸ್ಪರ್ಶದಿ ಪುಳಕಿಸುವ
ಆ ಜೋಡಿಯ ಜೋಡಿ ಕೈಗಳಿಗೆ

ಕನಸನ್ನು ಸವಿದು
ನನಸಲ್ಲಿ ನೆನೆವ
ಆ ಜೋಡಿಯ ತೀರದ ವಿರಹಕೆ 

ಚುಂಬನದಲ್ಲಿ ಕರಗಿ
ಅಪ್ಪುಗೆಯಲಿ ಮುದಗೊಳ್ಳುವ
ಆ ಜೋಡಿಯ ತನ್ಮಯ ಭಾವಸಿರಿಗೆ

                    ಒಲುಮೆಯ  ದಿನದ ಶುಭಾಶಯಗಳು

6 ಸ್ಪಂದನೆ/ಗಳು:

  1. ಬಹಳ ಚೆನ್ನಾಗಿದೆ ಸುಹಾಸ್

    ReplyDelete
  2. Hmmmm ತುಂಬಾ ಚೆನ್ನಗಿದೆ :) ನಮಿಗೆ dedicate ಮಾಡಿರೋದಕ್ಕೆ ಬಹಳ ಖುಷಿ ಆಯ್ತು, ನಮ್ಮಿಬರ ಭಾವವನ್ನ ನಿನ್ನ ಕವನದಲ್ಲಿ ಕಲ್ಪಿಸಿಕೊಳ್ಲೋತರ ಮಾಡಿದ್ಯ. Nice.. Keep going... :) Happy Valentines day to you to.. :)

    ReplyDelete
    Replies
    1. Thanks!! Guess this should be Ramya!! :) ಹೆಸರು ಹಾಕಕ್ಕೆ ಎನು ದಾಡಿ??‌

      Delete
  3. koncha jasthi koncha kadime illa anno haage, utprekshe illade chikkadagi chokkavaagi muddagi mooDibandide..
    prathi 2 linegaligu, 3 ne aline adbuthavaagi mooDi bandide...

    ReplyDelete
  4. ನಿನ್ನ ಕಾಮೆಂಟು ಸಹ ಅದ್ಭುತವಾಗಿ ಮೂಡಿ ಬಂದಿದೆ,, ;)‌ ಧನ್ಯವಾದಗಳು.. :)‌

    ReplyDelete